“ಆರಂಭ”,

ಬೆರೆತು ಬದುಕಿಸಿದ ನನ್ನೊಲವಿನ ಸಖಿ ತೊರೆದು ಹೋದಳು ದೂರಾತಿದೂರದ ಕಾಣದೂರಿಗೆ, ದುಃಖ ಸಾಗರಕ್ಕೆನ್ನನ್ನು ದೂಡಿ.ಸಾಕಿ ಸಲಹಿದಜ್ಜಿಯರೊಬ್ಬೊಬ್ಬರಾಗಿ ಏಕೀ ಬದುಕ ದಂದುಗ ಸಾಕಪ್ಪಾಸಾಕೆಂದು ಮುಪ್ಪಡಿಸಿ ಅಲಸಿಕೆ ವ್ಯಾಧಿಯಿಂದಳಿದರು.ಹತ್ತು ಮಂದಿಯಿದ್ದೂ ಇರುವುದೊಬ್ಬನೇ.ಸತ್ತವರು ಸತ್ತು, ಇದ್ದೂ ಹತ್ತಿರ, ಇರುವುದು ದೂರವೇ ಎನ್ನಿಸಿ ಸುತ್ತಮುತ್ತವರು, ನೊಂದೆ.ದೂರವಾಯಿತು ಹುಟ್ಟಿದೂರು. ನೆಲೆಸಿ ದೂರಾಗಲಿಲ್ಲ ಯಾವತ್ತೂ ಪರಮಾಪ್ತ ಸ್ವಂತ. ಹಳೆಯ ಮನೆಯುರಳಿ ಬಿದ್ದಿತು ಮಳೆಗೆ.ನಿತ್ಯ ಬದಲಾವಣೆಯ ಬಾಳಲ್ಲುಳಿವ ಸತ್ಯ ಯಾವುದು ಮತ್ತೆ? ಹೊತ್ತಿ ಉರಿವ ದೀಪ ಉರಿದಾರುವುದು ಗೊತ್ತು. ಕೊನೆಯೇ ಹಾಗೆ.ಪ್ರತಿಯೊಂದು ಹಣತೆಗೂ ಇರುಳ ಒಡಲನು ಹೊಕ್ಕುಕತ್ತಲ ಗರ್ಭ ಸೇರುವಾಸೆ.ಬಿತ್ತಕ್ಕೆ ಮಣ್ಣ ಹೊಕ್ಕು ಮತ್ತೆ ತಲೆಯನ್ನೆತ್ತಿ ಮೇಲಕ್ಕೆ ಹೊತ್ತು ಬರಲದೇ ಮೃತ್ತು.ಭರಪೂರ ಘೋರ ಮಳೆ ಸುರಿದು ಗಿಡಮರ ನಗರ ಪ್ರವಾಹದಲ್ಲದ್ದಿ ಬರೀ ತರಂಗ ಮದ್ದಲೆಯಬ್ಬರ. ನೀರೇ ನೀರು.ಇರುವುದೇನು ಕೊನೆಗೆ?ಅಳುವಿನ ಕಡಲ ನೊರೆತೆರೆ ನಡುವೆ ಕೊನೆಗೊಂದಾಲದೆಲೆ ತೇಲುವುದೆ? ಗುರುವಿನ ಕರುಣಾಪೂರ್ಣ ನಗೆಯೇ ನಮ್ಮ ಪೊರೆವ ತಿಂಗಳ ತೆಪ್ಪ? ಅವನೇನು ಮಹಾ? ಎಲ್ಲ ಹೇಳಿದ್ದಾರೆ ಹಿಂದಿನವರೆಂದು ವಕ್ರನಗೆ ನಕ್ಕವರ ನಗುವುದು ನಿತ್ಯ ಅರಳುವ ಹೂವು.ಆರುವ ತನಕುರಿವ ಕುಡಿ.ಕಣ್ಣ ಹನಿಗಳೆ ನನಗೆ ಜಪಸರವಾಗಿ ನಿನ್ನನ್ನೆ ಬಿಡದರೆಗಣ್ಣಲ್ಲಿಧ್ಯಾನಿಸುವೆ ನಿನ್ನ ಬದುಕೇ ಕಲಿಸಲೆನಗೆ ದಾಟುವ ಪಾಠ.ಮುಳುಗುವನು ಸೂರ್ಯ ಮಬ್ಬಿನಿರುಳಲ್ಲಿ ಬೆಳಗುವನು ಮುಂಜಾನೆ.ಹೊಳೆ ಮುಳುಗುವುದು ಹೆಗ್ಗಡಲಲ್ಲಿ.ತಿರುಗ ಮಳೆಯಾಗಿ ಚಕ್ರಸುತ್ತು.ಬರುವುದೆಲ್ಲಾ ಬರಲಿ, ಹೋಗಲಿ ಹರಿದು.ಇರುವೆ ನಾನಿರುವಂತೆ.ಇರಲಿ ಸಮಶ್ರುತಿ, ಸ್ವಸ್ಥ ಚಿತ್ತ. ನೆಲೆ ಸಿರಲೆದೆಯಲ್ಲಿ ಸ್ವಸ್ತಿ.

courtsey:prajavani.net

“author”: “ಎಚ್‌.ಎಸ್‌.ವೆಂಕಟೇಶಮೂರ್ತಿ”,

https://www.prajavani.net/artculture/poetry/poem-arambha-645572.html

Leave a Comment

Your email address will not be published. Required fields are marked *

Scroll to Top