ತೊರೆ ಮತ್ತು ನಾನು

ನಾ ಹರಿವ ಝರಿ
ನಾ ಕುಣಿಯುತ ಸಾಗುವ ತೊರೆ
ನಾ ನಿನಾದದಿ ಧುಮುಕುವ ಜಲಪಾತ
ಆ ಬಾಲ್ಯದಲ್ಲಿ ಆ ಯೌವನದಲ್ಲಿ
ನಾ ಪಡೆದ ಹೊಸದೊಂದು ತಿರುವು
ನಾ ಕಂಡಿದ್ದು ಅಡ್ಡಡ್ಡ ಬಂಡೆ
ನಾ ಚಡಪಡಿಸಿದೆ ಸಿಗದೆ ಇಳಿಜಾರು
ನಾ ನಿಂತೆ ನಾ ನಿಂತೆ ಗಂಟಿನ ನಂಟಿನಲಿ
ನಾನೇ ಬಿಗಿದಪ್ಪಿದೆನೆ ಈ ಹಾದಿ?
ತಿರುವಿನ ನೀರಲ್ಲರಾಡಿ ರಾಡಿ.
ಈ ತೊರೆ ಈ ಝರಿ ಈ ಜಲಪಾತ
ನಿಲ್ಲದಲ್ಲ ಸಿಕ್ಕೊಡನೆ ಬಂಡೆ?
ನಾ ಅರಿತೆ ನಾ ಅಂತೆ ನನಗೀಗ ಬೇಕು ಹೊಸ ಹಾದಿ
ನಾನಾಗಲಿಲ್ಲ ನಿಂತ ಕೆರೆಯ ನೀರು
ನಾ ಬಯಸಿದ್ದು ಝುಳು ಝುಳು ನಿನಾದದಿಹರಿವ ನೀರು
ನಾ ಕಂಡೆ ಸರಿದು ಸಾಗುವ ಮಾರ್ಗ
ನಾನೀಗ ಗಂಭೀರ ಜಲಪಾತ ಧುಮುಕಿದಷ್ಟು ಅಬ್ಬರ
ಧೈರ್ಯ, ಬಲ, ಸ್ಪೂರ್ತಿಯ ಆಗರ

– ಉಮಾ ಭಾತಖಂಡೆ

Leave a Comment

Your email address will not be published. Required fields are marked *

Scroll to Top