ಸಹಜ ಕೃಷಿ

ಸಹಜ ಕೃಷಿ….!
ಬದುಕಿಗೂ…. ಭೂಮಿಗೂ….!! ಇಳೆಗೂ… ಇಹಕ್ಕೂ….!!
ಸಹಜ ಕೃಷಿ…!
ಭೂಮಿ ಬಗೆಯುತ್ತಾ
ಹೋದಂತೆ ನೇಗಿಲು
ಆಳದಿಂದ ಮೇಲೆದ್ದ ಮಣ್ಣು
ಎರೆಡೂ ಬದಿಗೆ ಹೊರಳಿ
ಹೊರ ವಾತಾವರಣಕ್ಕೆ
ಅನಾವರಣಗೊಳ್ಳುತ್ತಾ,
ಹೊಸ ಚೇತನದ ನಿರ್ಮಿತಿಗೆ
ಜೀವ ತಳೆವಂತೆ,
ಬಯಕೆಗಳೇ ಬಲೆಯಾಗಿ
ಬಿಗಿಗೊಂಡ ಮನವನುತ್ತುತ್ತ
ಅಷ್ಟಷ್ಟೇ ಉತ್ಸಾಹ, ಸ್ಪೂರ್ತಿ,
ನಂಬಿಕೆ, ಕನಸುಗಳ ಬೀಜಬಿತ್ತಿ
ದಿಗಿಲು, ಹಠ, ಗೊಂದಲ,
ನಿರಾಶಾಭಾವಗಳ ಕಳೆಕಿತ್ತು
ಮನದ ತಿಳಿ-ಬಿಳಿಯ ಕಳೆಯದೇ
ಭಾವನಾತ್ಮಕ ಸೆಲೆ ಚಿಮ್ಮುವ
ನೈಸರ್ಗಿಕ ಕೃಷಿಯು ಒಡಮೂಡಿ ಬರಲಿ…!
-ಹೊಸ್ಮನೆ ಮುತ್ತು.

Leave a Comment

Your email address will not be published. Required fields are marked *

Scroll to Top