ರಾಷ್ಟ್ರೀಯ ಯುವ ದಿನ

ರಾಷ್ಟ್ರೀಯ ಯುವ ದಿನದ ಶುಭಾಶಯಗಳು

ಸ್ವಾಮಿ ವಿವೇಕಾನಂದರ ಬಗ್ಗೆ ಜಿ.ಎಸ್. ಶಿವರುದ್ರಪ್ಪನವರು ಬರೆದ ಕವನ

ಓ ಬಂದಾ ಶ್ರೀಗುರು ವಿವೇಕಾನಂದ
ಆ ಧ್ರುವ ಮಂಡಲದಿಂದ

ಮೊರೆಯುವ ಕಡಲಿಗೆ ಹಾರಿ ಧುಮುಕಿದ
ತೆರೆಗಳ ಸೀಳಿದ ಈಜಿದ ನುಗ್ಗಿದ
ಗಟ್ಟಿ ಬಂಡೆಯಲಿ ಬೇರೂರಿದ
ಬಾನೆತ್ತರ ಬೆಳೆದ ಬೆಳಕಿನ ಗೋಪುರವಾದ

ದಕ್ಷಿಣೇಶ್ವರದ ವಿದ್ಯುತ್ ಕೇಂದ್ರದ ಕೋಶಾಗಾರ
ಪೂರ್ವ ಪಶ್ಚಿಮಕೆ ತಂತಿಯ ಹಾಯಿಸಿ ಕೊಟ್ಟನು ಬೆಳಕಿನ ಆಹಾರ
ಕೊಲಂಬೊದಿಂದಲ್ಮೋರದ ತನಕವು ಇವನದೆ ಮಿಂಚಿನ ತೇರು
ಇವನಡಿಗಳ ನುಡಿಗಳ ಸ್ಪರ್ಶಕೆ ಝಗ್ಗನೆ ಹತ್ತದೆ ಇದ್ದವರಾರು

ವಜ್ರದ ಮೈ ಉಕ್ಕಿನ ನರ ಕುಡಿಮಿಂಚಿನ ಕಣ್ಣು
ಗುಡುಗಿನ ದನಿ ಹೊನಲಿನ ನಡೆ ಎದೆ ಬೆಳದಿಂಗಳ ಹಣ್ಣು
ಕವಿ ಋಷಿ ಯೋಗಿ ಸಂತ
ಲೋಕಾದ್ಯಂತ ನಡೆವ ವಸಂತ

Leave a Comment

Your email address will not be published. Required fields are marked *

Scroll to Top