ಬತ್ತಿದ ನದಿ

ತುಂಬಿದಂಬರದಿಂದುದುರಿದಮೃತ ಫಲಿಸಿ ಬಸುರಿಯಾದಂತೆ ನದಿ ದುಂದುಮುಕುತ್ತಲೇ ಭೋರ್ಗರೆ ಯುವುದರದರದೊಳು ಜಿಗಿದು ಸೇರಿ , ಸುಳಿಯೊಳಗೆ ಈಜಿ ಕರಗಿ ಹೋಗಬಹುದು ನೋಡಲು ಬಾರದು ಬತ್ತಿದ ನದಿಯ ಬಳುಕಿ ಸಾಗುವ ನದಿಯೊಂದಿಗೆ ಓಡಿ ದಣಿದುದಡದಲಿ ಕುಳಿತುನ್ಮನ ತುಂಬಿಕೊಳ್ಳಬಹುದು ಘನ ಬಂಡೆ ತಬ್ಬಿ , ಸೀಳಿ ಇಬ್ಭಾಗ ಹರಿದರಿದು ಸವೆಸಿ ಕಾಲವನೇ ಮಸೆದು, ನುಣ್ಣನೆ ಸಾಗುವ ನದಿ ತಣ್ಣಗೆ ಬೊಗಸೆಯಲಿ ತುಂಬಿ ದಣಿವಾರಿಸಿಕೊಳ್ಳಬಹುದು ನೋಡಲು ಬಾರದು ಬತ್ತಿದ ನದಿಯ ಭುವಿಯೊಳಗೊಂದಾದಮೃತ ಬಿಂದು ವಿಕಸಿಸಿ ಹರಿದು ಧಾರುಣಿಯ ನೆನಸಿ ವಿಸ್ತರಿಸಿ ಗಿರಿ ಪಾತ್ರ ಸಮರುಚಿನನ್ನಿನೊಂದರೊಳಗೆ ಎರಡೊಂದಾಗಿ ಬೆಸೆದು ಬಸಿರಾದ ಮಹಾತಾಯಿಯೊಳಗೆ ಮುಳುಗಿ ಪಾವನವಾಗಬಹುದು ನೋಡಲು ಬಾರದು ಬತ್ತಿದ ನದಿಯ ಸಕಲಚರಾಚರಗಳುಚ್ಚಿಷ್ಠ ಪಾಪ,<ಪುಣ್ಯಗಳ ಭಾರ ಇಳಿಸಿ ಯೋಜನಗಳ ದೂರ ಬಳಸಿ ಗಿರಿ ಪರ್ವತಗಳ ತೊಳೆದಳಿಸಿ ಧರೆ ಕೊಳೆಯ ರುಚಿ ಕಳೆದು ಮನೋಸಾಗರವ ಸೇರಿಅಮೃತಮಯಿಯನನ್ಯತೆ ಅನುಭಾವಿಸಬಹುದು ನೋಡಲು ಬಾರದು ಬತ್ತಿದ ನದಿಯ

courtsey:prajavani

https://www.prajavani.net/artculture/poetry/battida-nadi-poem-710411.html

Leave a Comment

Your email address will not be published. Required fields are marked *

Scroll to Top