ಮಿಠಾಮಿ ಗೊಂಬೆ

ಮಿಠಾಮಿ ಗೊಂಬೆ
ಚಾಕೋಲೇಟ್ ಕುರುಕುರು ಲೇಸ್ ಗಳ ಅಬ್ಬರದಲ್ಲಿ ಹಿಂದೆ ಶಾಲೆ. ಸಂತೆಗಳ ಬಳಿ ಕಾಣಸಿಗುತ್ತಿದ್ದ ಮಿಠಾಯಿ ಗೊಂಬೆ ನೇವದ್ಯಕ್ಕೆ ಸರಿದಿದೆ. ಗೊಂಬೆಗೆ ಅಳವಡಿಸಿದ ಕೋಲಿನ, ವಿಶೇಷ ರುಚಿಯ ಈ ಮಿಠಾಯಿ ಇತ್ತೀಚೆಗೆ ರಾಜಾಜಿನಗರದ ರೇಣುಕಾಚಾರ್ಯ ಹೈಸ್ಕೂಲಿನ ಮುಂದೆ ಕಂಡು ಬಂದಿತು.ಮಿಠಾಯಿ ಗೊಂಬೆ ನೋಡುವುದೇ ಚಂದ ಅಲಂಕಾರ ಮಾಡಿದ ಮುದ್ದಾದ ಗೊಂಬೆಯನ್ನು ಕೋಲಿಗೆ ಸಿಕ್ಕಿಸಿ ಬಹುದೂರದವರೆಗೂ ಮಕ್ಕಳಗಮನ ಸೆಳೆಯಲು ಮಾಡಿಕೊಂಡ ತಂತ್ರಗಾರಿಕೆ ಯಂತೂ ಇನ್ನೂ ಆಸಕ್ತಿಕರ. ಗೊಂಬೆಯ ಕೈಯಲ್ಲಿ ರುವ ದೊಡ್ಡದಾದ ತಾಳಗಳಿಗೆ ಹೊಂದಿಕೊಂಡಂತೆ ಗೊಂಬೆಯ ಹಿಂಭಾಗದಲ್ಲಿರುವ ಕೀಲು ಎಳೆದರೆ ಸಾಕು ಎರಡು ತಾಳ ಒಂದಕ್ಕೊಂದು ಸೇರಿ ಸದ್ದಾಗುತ್ತದೆ. ಈ ವಿಭಿನ್ನ ಮಾರಾಟದ ವೈಖರಿ ಮಿಠಾಯಿ ಕೊಳ್ಳುವವರನ್ನು ಆಕರ್ಷಿಸುತ್ತವೆ. ಸಕ್ಕರೆ ಎಳೆ ಪಾಕಕ್ಕೆ ಹಲವಾರು ಬಣ್ಣಗಳನ್ನು ಮಿಶ್ರ ಮಾಡಿ ತಯಾರಿಸಲಾದ ಮಿಠಾಯಿಯನ್ನು ಗೊಂಬೆ ಕೋಲಿಗೆ ಅಂಟಿಸಲಾಗುತ್ತದೆ. ಈ ಅಂಟಿನ ಮಿಠಾಯಿಯನ್ನು ಬಿದಿರಿನ ಕಡ್ಡಿಗೆ ಸುತ್ತಿ ಬೇಕಾದ ಆಕಾರ ಮಾಡಿ ಕೊಡುವ ರೀತಿಯೂ ಸೃಜನ ಶೀಲವಾಗಿರುತ್ತದೆ. ಕ್ಷಣ ಮಾತ್ರದಲ್ಲಿ ವಿಭಿನ್ನ ಆಕೃತಿ ಯಲ್ಲಿ ಮಿಠಾಯಿಯಲ್ಲಿ ಮಿಠಾಯಿಯನ್ನು ಮಕ್ಕಳ ಆಕೃತಿ ಯಲ್ಲಿ ಮಿಠಾಯಿಯನ್ನು ಮಕ್ಕಳ ಕೈಗೆ ಹಾಗೂ ಬೆರಳಿಗೆ ಅಂಟಿಸುವ ಕಲಾತ್ಮಕತೆ ವಿಶಿಷ್ಟವಾದುದು. ಆಧುನಿಕ ಕಾಲದ ಚಾಕೋಲೇಟ್ ಜಂಕ್ ಫುಡ್ ಗಳ ಅಬ್ಬರದಲ್ಲಿ ಸಾಂಪ್ರದಾಯಿಕ ಮಿಠಾಯಿಯ ಕಾಲ ಮುಗಿದು ಹೋಗಲಿದೆ. ಬಾಲ್ಯವನ್ನು ನೆನಪಿಸುವ ಈ ಅಪರೂಪದ ಮಿಠಾಯಿ ಬಾಲೆ ಸೈಕಲ್ ಬಿಟ್ಟು ಮೋಟಾರ್ ಸೈಕಲ್ಲೇರಿ ಹೊರಟಿದ್ದಾಳೆ.

ಹೊಸ್ಮನೆ ಮುತ್ತು

Leave a Comment

Your email address will not be published. Required fields are marked *

Scroll to Top