ಸಂಡೇ ಮೂಡು

ಅಂಗೈಗಳಲಿ ಗದ್ದವ ಇಟ್ಟು ಕಿಟಕಿಯ ಸರಳಿಂದಾಚೆಗೆ ನೋಡುತ ಇದ್ದಾನವನು ಇದ್ದಾನೆ ಹಾಗೇ ಹಾಗೇ ಇದ್ದಾನೆ ನಗರೇಶ್ವರ ಗುಡಿ ಚೌಗಡ ಕೇಳಿಸಿ ಮಸೀದಿಯಿಂದ ದನಿಯೂ ಬಂದು ಹಿತ್ತಲಿನಲ್ಲಿ ಕಾವ್ ಕಾವ್ ಕೇಳಿ ಅಲ್ಲಿಯೆ ಇದ್ದಾನವನು ಹೌದುಅಲ್ಲಿಯೇ ಇದ್ದಾನೆ! ಬಾಗಿಲ ಕದ ತೆಗೆದೂ ಆಗಿ ಅಂಗಳಕ್ಕೆ ಥಳಿ ಹೊಡೆದೂ ಆಗಿ ರಂಗವಲ್ಲಿಯನು ಬಿಟ್ಟೂ ಆಗಿ ಅವ್ವನ ಕೂಗು ಕೇಳಿಯು ಆಗಿ ಇದ್ದಾನಿದ್ದಾನಿದ್ದಾನೆ ಇನ್ನೂ ಅಲ್ಲಿಯೆ ಇದ್ದಾನೆ! ಪೇಪರು ಹೊಸಿಲಲಿ ಬಿದ್ದೂ ಆಯಿತು ಸೊಪ್ಪು ಮಾರುವವಳು ಹೊರಟೂ ಹೋದಳು ನಲ್ಲಿಯ ಸೊರ್ ರರ್ಶು ರವೂ ಆಯಿತು ಟಕ್ ಟಕ್ ಟಕ್ ಟಕ್ ಕೋಲಿನ ಸದ್ದು ಮೇಲಿನ ಮನೆಯಾ ದೇಸಾಯರದು ವಾಕಿಂಗ್ ಮುಗಿಸಿ ಬಂದೂ ಆಯಿತು ಅಪ್ಪನ ತುಟಿಯಲಿ ಟೀ ಇಳಿಯುವಾಸರರ ಸೌಂಡೂ ಕೇಳಿಸಿ ಆಯಿತು ಉಂಹಂ ಉಂಹುಂ ಉಂಹಂ ಉಂಹುಂ ಇದ್ದಾನಿನ್ನೂ ಇದ್ದಾನೆ ಅವನು ಅಲ್ಲಿಯೆ ಇದ್ದಾನೆ! ಈ ದಿನ ಸಂಡೆ, ಏನಿದು ಮೂಡೆ ಕಾಲನು ಚಾಚಿ ಉದ್ದಕೆ ಉದ್ದಕೆ ಬಿದ್ದುಕೊಂಡಲ್ಲಿಯೆ ಅಲ್ಲಿಯೆ ಅಲ್ಲಿಯೆ ಕಿಟಕಿಯಲ್ಲಿ ಮುಖವಿಟ್ಟು ಆಚೆಗೆ ಏನೊ ನೋಡುತ್ತಿದ್ದಾನವನು ಇದ್ದಾನಿದ್ದಾನಿದ್ದಾನೆ! ಯಾರಿಗು ಕಾಣದ ದೂರದಲೆಲ್ಲೋ ಅಡಗಿಕೊಂಡಿಹುದನೇನೋ ಅವನು ನೋಡುತಲಿದ್ದಾನಿದ್ದಾನೆ! ಸಂಡೇ ಅಂದರೆ ಸಂಡೇ ಅದು ಎಲ್ಲಾ ಮರೆಸಿ ಎಲ್ಲಿಯೊ ಇರಿಸಿ ಸುಮ್ಮನೆ ಇರಿಸುವ ಸಿಹಿ ಸಿಹಿ ಉಂಡೆ ಯಾರಿಗು ಕಾಣದ ಹಾಗೇ ಹೂಂ ಮೆಲ್ಲುತಲಿದ್ದಾನಿದ್ದಾನೆ

author- ಆನಂದ ಪಾಟೀಲ

courtsey:prajavani.net

https://www.prajavani.net/artculture/poetry/sunday-moodu-682409.html

Leave a Comment

Your email address will not be published. Required fields are marked *

Scroll to Top