ಯಾರಿಟ್ಟರೀ ಚುಕ್ಕಿ…!

ಯಾರಿಟ್ಟರೀ ಚುಕ್ಕಿ…!

ರಂಗೋಲಿಯಂತೆ, ಮುತ್ತಿನ ಲೋಲಕದಂತೆ ಕಾಣುವ, ನೋಡಲು ಕುತೂಹಲಕಾರಿಯಾಗಿರುವ  ಈ ಮೊಟ್ಟೆಗಳು  ಸೌಂದರ್ಯಕ್ಕೆ ಹೆಸರಾಗಿರುವ ಚಿಟ್ಟೆಯದ್ದು    ತೆಳು ಹಳದಿ ಮಿಶ್ರಿತ ಬಿಳಿ ಬಣ್ಣದ ಸಾಸುವೆ ಗಾತ್ರದ ಪಾರದರ್ಶಕವಾದ  ಈ ಮೊಟ್ಟೆಗಳು ಒಂದಕ್ಕೊಂದು ಬಿಗಿಯಾಗಿ ಅಂಟಿಕೊಂಡಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಪಾರದರ್ಶಕವಾದ ಈ ಮೊಟ್ಟೆಯೊಳಗೆ ಬೆಳೆಯುತ್ತಿರುವ ಚಿಕ್ಕ ಕಂಬಳಿ ಹುಳುವನ್ನು   ಕಾಣಬಹುದು. ಮೊಟ್ಟೆ ಒಡೆದು ಬಂದ ಮರಿಯು ಮೊಟ್ಟೆಯ ಕವಚವನ್ನೇ ತಿನ್ನುತ್ತದೆ. ಅದರಲ್ಲಿರುವ ಪೌಷ್ಠಿಕಾಂಶ  ಅದರ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ “ಮೆಟಾಮಾರ್ಫಾಸಿಸ್” ಎಂಬ ಪ್ರಕ್ರಿಯೆಗೆ ಓಳಗಾಗಿ ಸುಂದರ ಚಿಟ್ಟೆಯಾಗಿ ಬದಲಾಗುತ್ತದೆ. ಈ ಆಕರ್ಷಕವಾದ ಮೊಟ್ಟೆಗಳು ನಮ್ಮ ಮನೆಯ ಹಿತ್ತಲಲ್ಲಿ ಕಾಣಸಿಕ್ಕವು.

ಹೊಸ್ಮನೆ ಮುತ್ತು

Leave a Comment

Your email address will not be published. Required fields are marked *

Scroll to Top